ಸಾವಿರ ವರ್ಷ ಬದುಕಬೇಕಿದ್ದ ಜೀವ
ಸಾವಿರಾರು ವರ್ಷ ಬದುಕುಳಿಯಲೇ ಬೇಕಾಗಿದ್ದ ಜೀವ ವೀಣಾಧರಿಯವರದ್ದು. ಎಚ್ಐವಿ ಬಾಧಿತರೆಲ್ಲರಲ್ಲೂ ಜೀವನೋತ್ಸಾಹವನ್ನು ಪುಟಿಯುವಂತೆ ಮಾಡಿವರೀಕೆ. ನಾಲ್ಕು ವರ್ಷಗಳ ಹಿಂದೆ ಪರೀಕ್ಷೆಯೊಂದಕ್ಕಾಗಿ ಮಂಗಳೂರಿನಲ್ಲಿದ್ದಾಗ ವೀಣಾರ ಪರಿಚಯವಾಯಿತು. ನಾನು ಉಳಿದುಕೊಂಡಿದ್ದ ಗೆಳೆಯರ ಮನೆಯ ಸಮೀಪವೇ ವೀಣಾ ಅವರ ಮನೆ ಮತ್ತು ಕಚೇರಿ. ನನ್ನ ಮಂಗಳೂರಿನ ಗೆಳೆಯರೆಲ್ಲರಿಗೂ ಪರಿಚಿತರೂ ಹತ್ತಿರದವರೂ ಆಗಿದ್ದ ವೀಣಾ ಅವರ ಬದುಕಿನ ಕಥೆ ಕೇಳಿ ನನಗೂ ಕುತೂಹಲ ಉಂಟಾಯಿತು. ಮೆಂಡೋನ್ಸಾ ಕಾಂಪೌಂಡ್ ನಲ್ಲಿದ್ದ ನಮ್ಮ ಮನೆಯಲ್ಲಿ ಕುಳಿತು ಆ ಸಂಜೆ ವೀಣಾ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ್ದರು. ಅದಷ್ಟನ್ನೂ ನಾನು ಧ್ವನಿಮುದ್ರಿಸಿದ್ದೆ. ಅದರ ಆಯ್ದ ಭಾಗಗಳನ್ನು ಒಂದು ಲೇಖನವಾಗಿಸಿ ಉದಯವಾಣಿಯ ಮಹಿಳಾ ಸಂಪದ ಪುರವಣಿಯಲ್ಲಿ ಪ್ರಕಟಿಸಿದ್ದೆ. ವೀಣಾರ ದಿಟ್ಟ ನಿಲುವುಗಳನ್ನು ಹೊರಜಗತ್ತಿಗೆ ಪರಿಚಯಿಸಿದ ಮೊದಲ ಬರೆಹ ಇದು. ಆಮೇಲೆ 'ತರಂಗ' ವಾರಪತ್ರಿಕೆ ಇವರ ಬದುಕಿನ ಕತೆಯನ್ನು ಮುಖಪುಟ ಲೇಖನವಾಗಿ ಪ್ರಕಟಿಸಿತು. ಹಾಯ್ ಬೆಂಗಳೂರಿನ ರವಿ ಬೆಳಗರೆಯವರಂತೂ ವೀಣಾರ ಆಂದೋಲನಕ್ಕೆ ಸಕಲ ರೀತಿಯ ನೆರವುಗಳನ್ನು ನೀಡಿದರು. ಅಷ್ಟೇ ವೀಣಾರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಂಡರು. ಎಚ್ ಐವಿಯೊಂದಿಗೆ ನೇರ ಸಂಬಂಧವೇ ಇಲ್ಲದ ಮೆದುಳಿನ ರಕ್ತ ಸ್ರಾವದಿಂದ ವೀಣಾ ತೀರಿಕೊಂಡರು. ಅವರ ನೆನಪಿಗಾಗಿ ಈ ಹಳೆಯ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.
- 4 comments
- 2938 reads
ಮುಸ್ಲಿಮರಾದರೆ ಸುಮ್ಮನಿರುತ್ತಿದ್ದರೇ?
ನನ್ನ ಹೆಸರು ಇಸ್ಮಾಯಿಲ್ ಎಂದಿರುವುದರಿಂದ ಅನೇಕ ಸಂದರ್ಭಗಳಲ್ಲಿ ನನಗೆ ಬೇಕಿಲ್ಲದಿದ್ದರೂ ನಾನು ಮುಸ್ಲಿಮರ ಪ್ರತಿನಿಧಿಯಾಗಿಬಿಡುತ್ತೇನೆ. ಮತ-ಧರ್ಮದ ಕುರಿತ ನನ್ನ ವೈಯಕ್ತಿಕ ನಿಲುವುಗಳ ಬಗ್ಗೆ ಅರಿವಿರುವ ಹತ್ತಿರದ ಗೆಳೆಯರನ್ನು ಹೊರತು ಪಡಿಸಿದರೆ ನಾನೊಬ್ಬ ಮುಸ್ಲಿಮ ಎಂಬ ಪೂರ್ವಗ್ರಹದೊಂದಿಗೆ ಚರ್ಚೆಗಿಳಿಯುವ ಅನೇಕರಿದ್ದಾರೆ. ಈ ಬಗೆಯ ಚರ್ಚೆಗಳಿಂದ ದೂರ ಉಳಿಯಲು ನಾನು ಪ್ರಯತ್ನಿಸಿದರೂ ಕೆಲವೊಮ್ಮೆ ಅದರಿಂದ ಪಾರಾಗಲು ಸಾಧ್ಯವಾಗುವುದಿಲ್ಲ. Read more »
- 10 comments
- 3838 reads
ಇದ್ದವರಿಬ್ಬರಲ್ಲಿ ಕದ್ದವರಾರು?
ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದದ್ದು ಮತ್ತು ಆ ಅವಧಿಯದ್ದಕ್ಕೂ ಕರ್ನಾಟಕ ಬರದ ಬಾಧೆಯನ್ನು ಅನುಭವಿಸಿದ್ದನ್ನು ಬಹುಶಃ ಯಾರೂ ಮರೆತಿರಲಿಕ್ಕಿಲ್ಲ. ಈ ಅವಧಿಯಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಅವರ ಸಂಪುಟ ಸಹೋದ್ಯೋಗಿಗಳಾದ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಕೇಂದ್ರ ಸರಕಾರ ಬರ ಪರಿಹಾರಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ ಎಂದು ಮೇಲಿಂದ ಮೇಲೆ ಹೇಳಿದ್ದೂ ಪತ್ರಿಕೆಗಳನ್ನು ಓದುವ, ಟಿ.ವಿ.ನೋಡುವ ಎಲ್ಲರಿಗೂ ನೆನಪಿರಬೇಕು.ಆಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರವಿತ್ತು. ಕರ್ನಾಟಕದ ಅನಂತಕುಮಾರ್ ಮತ್ತು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಕೇಂದ್ರ ಸಚಿವ ಸಂಪುಟದಲ್ಲಿದ್ದರು. ಕೇಂದ್ರದ ನೆರವಿಗೆ ಸಂಬಂಧಿಸಿದಂತೆ ಕರ್ನಾಟಕದ ಅಧಿಕಾರಾರೂಢ ಕಾಂಗ್ರೆಸ್ಸಿಗರ ಟೀಕೆ ಹೆಚ್ಚುತ್ತಲೇ ಹೋದಾಗ ಇಬ್ಬರೂ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದರು. ಕೇಂದ್ರ ಬರ ಪರಿಹಾರಕ್ಕೆಂದು ಒದಗಿಸಿದ್ದ ಹಣವನ್ನು ರಾಜ್ಯ ಸರಿಯಾಗಿ ಬಳಸಿಕೊಂಡಿಲ್ಲ. ಬಹಳಷ್ಟು ಹಣ ಬಳಸದೆಯೇ ಲ್ಯಾಪ್ಸ್ (laps) ಆಗಿದೆ ಎಂದಲ್ಲಾ ಗದ್ದಲವೆಬ್ಬಿಸಿದ್ದರು. ಇದಕ್ಕೆ ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಜಗಧೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮುಂತಾದವರೆಲ್ಲಾ ಧ್ವನಿಗೂಡಿಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. Read more »
- Add new comment
- 2351 reads
ಹಿರಿತೆರೆಯಲ್ಲಿ ಕಾಣಿಸದ ಸೀತಾರಾಂ ಮ್ಯಾಜಿಕ್
ಕಿರುತೆರೆಯ ಸ್ಟಾರ್ ನಿರ್ದೇಶಕ ಟಿ ಎನ್ ಸೀತಾರಾಂ 'ಮೀರಾ ಮಾಧವ ರಾಘವ' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೇ ಹೋಗಿದ್ದೆ. ನೋಡಿ ನಿರಾಶೆಯಾಯಿತು. Read more »
- 8 comments
- 3158 reads
ಯೇಸುಕ್ರಿಸ್ತ
ನಾರಾಯಣ ಗುರುಗಳ ಪರಂಪರೆಯ ಗುರು ನಿತ್ಯಚೈತನ್ಯ ಯತಿಗಳು ಎಲ್ಲ ಧರ್ಮಗಳ ಬಗ್ಗೆಯೂ ಆಳವಾದ ಅರಿವಿದ್ದವರು. ದೇಹಕ್ಕೆ ಬಾಧಿಸುವ ರೋಗಗಳಿಗಿಂತಲೂ ಹೆಚ್ಚಾಗಿ ಮನುಷ್ಯನನ್ನು ಕಾಡುವುದು ಮನಸ್ಸಿಗೆ ಬಾಧಿಸುವ ಆಧ್ಯಾತ್ಮಿಕ ರೋಗಗಳು. ಈ ರೋಗಗಳನ್ನು ಪರಿಹರಿಸಿದ ಮಹಾವೈದ್ಯರಲ್ಲಿ ಯೇಸು ಕ್ರಿಸ್ತರೂ ಇದ್ದಾರೆಂಬುದು ಯತಿಗಳ ಅನಿಸಿಕೆ. ಅವರು ಈ ಬಗೆಯ ಅಪೂರ್ವ ವೈದ್ಯರ ಕುರಿತು ರಚಿಸಿರುವ ಗ್ರಂಥದಲ್ಲಿರುವ ಯೇಸುವಿನ ಕುರಿತ ಬರೆಹದ ಭಾವಾನುವಾದ ಇಲ್ಲಿದೆ.
ಗುರುಕುಲದಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಹೆಸರು ಜೋಸೆಫ್. ಆತ ಮಾಡುವ ಕೆಲಸ; ಕಳೆದ ಎರಡು ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿರುವ ಬಡಗಿಯ ಕೆಲಸ. ನಾವಿಬ್ಬರು ಒಟ್ಟಿಗೆ ಕುಳಿತು ಮಾತನಾಡುವಾಗಲೆಲ್ಲಾ ನನ್ನನ್ನು ಬಹಳವಾಗಿ ಆಕರ್ಷಿಸುವುದು ಈ ಜೋಸೆಫ್‌ನ ಮಗ. ಅಪ್ಪನಿಂದ ಬರುವುದನ್ನೆಲ್ಲಾ ಈ ಮಗ ಪಡೆದುಕೊಂಡಿದ್ದ. ನಾನವನನ್ನು ಯೇಸು ಎಂದೇ ಕರೆಯುತ್ತಿದ್ದೆ. ಯೇಸು ಎಂಬ ಪದದ ಅರ್ಥ ಮತ್ತಾಯನು ಬರೆದ ಸುವಾರ್ತೆಯಲ್ಲಿ ಹೇಳಿರುವಂತೆ `ಜನಗಳನ್ನು ಪಾಪಗಳಿಂದ ಕಾಪಾಡುವವನು' ಎಂದಾಗಿದೆ. ಇಂದು ಮುಂಜಾನೆ ಗೆಳೆಯ ಜೋಸೆಫ್ ಜತೆ ಮಾತನಾಡಲು ತೊಡಗಿದಾಗ ವಾಗ್‌ರೂಪಿಯಾದ ಯೇಸುವನ್ನು ಕಂಡ ನಾನು ಕೇಳಿದೆ:
`ನೀನು ಹೇಗೆ ಜನರನ್ನು ಪಾಪಗಳಿಂದ ವಿಮೋಚಿಸುತ್ತೀಯಾ?'
ಆಗ ಯೇಸು ಪ್ರಶ್ನಿಸಿದ: `ಬೈಬಲ್‌ನ ಆದಿ ಕಾಂಡವನ್ನು ಓದಿದ್ದೀಯಾ?' ನಾನು ಹೌದೆಂದು ಗೋಣಾಡಿಸಿದೆ. ಸಂಭಾಷಣೆ ಮುಂದುವರಿಯಿತು.
ಯೇಸು: ಅದರಲ್ಲಿ ಹೇಳಲಾದ ಮೂರು ಆದಿಗಳು ಗೊತ್ತೇ? Read more »
- 3 comments
- 2930 reads
ಅಪ್ಪ, ನಕ್ಷತ್ರ ಮತ್ತು ಜಿ.ಟಿ.ಎನ್
ನಾವಿನ್ನೂ ಚಿಕ್ಕವರು. ನಾನು ಐದನೇ ಕ್ಲಾಸಿನಲ್ಲಿದ್ದೆ ಎನಿಸುತ್ತದೆ. ನಮ್ಮ ಅಪ್ಪನಿಗೆ ಒಂದು ಕಿರಾಣಿ ಅಂಗಡಿಯಿತ್ತು. ಪ್ರತೀ ಮಂಗಳವಾರ ನಸುಕಿಗೇ ಎದ್ದು ಅಪ್ಪ ಸೈಕಲ್ ಹತ್ತಿ ಹಾಸನದ ಸಂತೆಗೆ ಹೊರಡುತ್ತಿದ್ದರು. ವಾರವಿಡೀ ಅಂಗಡಿಗೆ ಬೇಕಾದ ಸರಕನ್ನೆಲ್ಲಾ ಆ ದಿನ ಸಂತೆಯಲ್ಲಿ ಖರೀದಿಸಿ ಗಾಡಿ ರಾಜಣ್ಣನ ಗಾಡಿಗೆ ತುಂಬಿಸಿ ರಾತ್ರಿ ಎಂಟು ಗಂಟೆಗೆ ಗಾಡಿಯ ಜತೆಗೇ ಮನೆಗೆ ಹಿಂದಿರುಗುತ್ತಿದ್ದರು. ಮಂಗಳವಾರವಿಡೀ ಅಪ್ಪ ಮನೆಯಲ್ಲಿ ಇರುತ್ತಿರಲಿಲ್ಲವಾದ್ದರಿಂದ ಶಾಲೆಯಿಂದ ಹಿಂದಿರುಗಿದ ತಕ್ಷಣ ನಾನೂ ನನ್ನ ತಮ್ಮ ಮನೆಯಲ್ಲಿರುವ ರೇಡಿಯೋ, ಗಡಿಯಾರ, ಮೂಲೆಯಲ್ಲಿ ಮುಸುಕು ಹೊದ್ದು ತಣ್ಣಗೆ ಕುಳಿತಿರುತ್ತಿದ್ದ ನೀರೆತ್ತುವ ಡೀಸೆಲ್ ಪಂಪ್‌ಗಳ `ತಂತ್ರಜ್ಞಾನ'ವನ್ನು ಅರಿಯಲು ಹರಸಾಹಸ ಮಾಡುತ್ತಿದ್ದೆವು. ಅಮ್ಮನ ಕಣ್ಣು ತಪ್ಪಿಸಿ ಮಾಡುವ ಈ ಕೆಲಸಕ್ಕಾಗಿ ನಾವು ಬಳಸುತ್ತಿದ್ದ ತಂತ್ರಗಳದ್ದೇ ಒಂದು ದೊಡ್ಡ ಕಥೆಯಾಗಿಬಿಡುತ್ತದೆ. Read more »
- 17 comments
- 5349 reads
ತೇಜಸ್ವಿ ನೆನಪು
ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಕತೆಯ ಆರಂಭದ ಸಾಲುಗಳು ಹೇಳುವಂತೆ `ಎಲ್ಲಾ ಶುರುವಾಗಿದ್ದು ಕಿರಗೂರಿನ ಮೇಲೆ ಮೂರು ರಾತ್ರಿ, ಮೂರು ಹಗಲು ಇದ್ದಕ್ಕಿದ್ದಂತೆ ಬೀಸಿದ ಬಿರುಗಾಳಿಯ ದೆಸೆಯಿಂದ'. ನನಗೂ ತೇಜಸ್ವಿ ಪರಿಚಯವಾಗಿದ್ದು ಹೀಗೆಯೇ. Read more »
- 15 comments
- 4571 reads
ಕನ್ನಡವೆಂಬ ಸಸ್ಯಾಹಾರಿ ಭಾಷೆ
ಹಾರುವವುಗಳಲ್ಲಿ ವಿಮಾನವನ್ನೂ, ಎರಡು ಕಾಲಿನವುಗಳಲ್ಲಿ ಮನುಷ್ಯರನ್ನೂ, ನಾಲ್ಕು ಕಾಲಿನವುಗಳಲ್ಲಿ ಕುರ್ಚಿ, ಮೇಜುಗಳನ್ನು ಮಾತ್ರ ತಿನ್ನದೇ ಬಿಟ್ಟಿರುವ ನನ್ನಂಥ ಕನ್ನಡಿಗರಿಗೆ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ. Read more »
- 6 comments
- 3942 reads
ಚಾರ್ಲ್ಸ್ ಮಿನೆಜೆಸ್ ಎಂಬ ಜೋಸೆಫ್ ಕೆ.
ಕಳೆದ ವರ್ಷ ಅಂದರೆ 2005ರ ಜುಲೈ ತಿಂಗಳಲ್ಲಿ ಲಂಡನ್ ಸ್ಫೋಟ ಸಂಭವಿಸಿತು. ಈ ಘಟನೆಯ ನಂತರ ಬ್ರೆಜಿಲ್ ನ ಯುವಕನೊಬ್ಬನನ್ನು ಲಂಡನ್ ಪೊಲೀಸರು 'ತಪ್ಪಾಗಿ' ಕೊಂದು ಬಿಟ್ಟರು. ಇದೇ ಹೊತ್ತಿಗೆ ಕಾಶ್ಮೀರದಲ್ಲೂ ಸೇನಾ ಪಡೆಗಳು ಮಕ್ಕಳನ್ನು ಉಗ್ರಗಾಮಿಗಳೆಂದು ಭಾವಿಸಿ ಕೊಂದ ಘಟನೆಯೂ ನಡೆದಿತ್ತು. ಆಗ ಬರೆದ ಲೇಖನ ಇದು.
- Add new comment
- 2385 reads

Recent comments
32 weeks 5 days ago
33 weeks 5 days ago
39 weeks 3 days ago
39 weeks 5 days ago
44 weeks 2 days ago
44 weeks 4 days ago
45 weeks 2 hours ago
46 weeks 14 hours ago
48 weeks 5 days ago
49 weeks 1 day ago