ಅನುವಾದಗಳು
ಲೈಂಗಿಕ ವೃತ್ತಿ ನಿರತಳ ಎರಡು ರಾತ್ರಿಗಳು
ನಳಿನಿ ಜಮೀಲಾ- ಈ ಹೆಸರು ಕೇರಳದಲ್ಲಿ ಜನಜನಿತ. ಕಾರಣ ಆಕೆ ಬರೆದ ಆತ್ಮಕಥೆ.`ಲೈಂಗಿಕ ವೃತ್ತಿ ನಿರತಳೊಬ್ಬಳ ಆತ್ಮಕತೆ' ಎಂಬ ಶೀರ್ಷಿಕೆಯ ಈ ಪುಸ್ತಕ ಸಂಪ್ರದಾಯಬದ್ಧ ಮನಸ್ಸುಗಳನ್ನೂ ಸ್ತ್ರೀವಾದಿಗಳನ್ನೂ ಏಕಕಾಲದಲ್ಲಿ ಕೆಣಕಿತ್ತು. ವೇಶ್ಯೆಯಾಗಿರುವುದೂ ಒಂದು ವೃತ್ತಿಯಾಗಬಹುದು ಎಂದು ಧೈರ್ಯವಾಗಿ ಹೇಳುವ ಮಹಿಳೆ ಸದ್ಯ ಕೇರಳಾ ಸೆಕ್ಸ್ ವರ್ಕರ್ಸ್ ಫೋರಂನ ಸಂಚಾಲಕಿಯಾಗಿದ್ದಾರೆ. ಪ್ರಸ್ತುತ ಲೇಖನದಲ್ಲಿ ತಮ್ಮ ಎರಡು ರಾತ್ರಿಗಳ ನೆನಪುಗಳನ್ನು ದಾಖಲಿಸಿದ್ದಾರೆ. ನಳಿನಿ ಜಮೀಲಾರ ಮಾತುಗಳನ್ನು ಮಲಯಾಳಂನಲ್ಲಿ ಪಿ.ಸಿ. ಹರೀಶ್ ಲೇಖನ ರೂಪಕ್ಕೆ ಇಳಿಸಿದ್ದರು. ಅದನ್ನಿಲ್ಲಿ ಅನುವಾದಿಸಲಾಗಿದೆ.
- 7 comments
- 4879 reads
ಯೇಸುಕ್ರಿಸ್ತ
ನಾರಾಯಣ ಗುರುಗಳ ಪರಂಪರೆಯ ಗುರು ನಿತ್ಯಚೈತನ್ಯ ಯತಿಗಳು ಎಲ್ಲ ಧರ್ಮಗಳ ಬಗ್ಗೆಯೂ ಆಳವಾದ ಅರಿವಿದ್ದವರು. ದೇಹಕ್ಕೆ ಬಾಧಿಸುವ ರೋಗಗಳಿಗಿಂತಲೂ ಹೆಚ್ಚಾಗಿ ಮನುಷ್ಯನನ್ನು ಕಾಡುವುದು ಮನಸ್ಸಿಗೆ ಬಾಧಿಸುವ ಆಧ್ಯಾತ್ಮಿಕ ರೋಗಗಳು. ಈ ರೋಗಗಳನ್ನು ಪರಿಹರಿಸಿದ ಮಹಾವೈದ್ಯರಲ್ಲಿ ಯೇಸು ಕ್ರಿಸ್ತರೂ ಇದ್ದಾರೆಂಬುದು ಯತಿಗಳ ಅನಿಸಿಕೆ. ಅವರು ಈ ಬಗೆಯ ಅಪೂರ್ವ ವೈದ್ಯರ ಕುರಿತು ರಚಿಸಿರುವ ಗ್ರಂಥದಲ್ಲಿರುವ ಯೇಸುವಿನ ಕುರಿತ ಬರೆಹದ ಭಾವಾನುವಾದ ಇಲ್ಲಿದೆ.
ಗುರುಕುಲದಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಹೆಸರು ಜೋಸೆಫ್. ಆತ ಮಾಡುವ ಕೆಲಸ; ಕಳೆದ ಎರಡು ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿರುವ ಬಡಗಿಯ ಕೆಲಸ. ನಾವಿಬ್ಬರು ಒಟ್ಟಿಗೆ ಕುಳಿತು ಮಾತನಾಡುವಾಗಲೆಲ್ಲಾ ನನ್ನನ್ನು ಬಹಳವಾಗಿ ಆಕರ್ಷಿಸುವುದು ಈ ಜೋಸೆಫ್‌ನ ಮಗ. ಅಪ್ಪನಿಂದ ಬರುವುದನ್ನೆಲ್ಲಾ ಈ ಮಗ ಪಡೆದುಕೊಂಡಿದ್ದ. ನಾನವನನ್ನು ಯೇಸು ಎಂದೇ ಕರೆಯುತ್ತಿದ್ದೆ. ಯೇಸು ಎಂಬ ಪದದ ಅರ್ಥ ಮತ್ತಾಯನು ಬರೆದ ಸುವಾರ್ತೆಯಲ್ಲಿ ಹೇಳಿರುವಂತೆ `ಜನಗಳನ್ನು ಪಾಪಗಳಿಂದ ಕಾಪಾಡುವವನು' ಎಂದಾಗಿದೆ. ಇಂದು ಮುಂಜಾನೆ ಗೆಳೆಯ ಜೋಸೆಫ್ ಜತೆ ಮಾತನಾಡಲು ತೊಡಗಿದಾಗ ವಾಗ್‌ರೂಪಿಯಾದ ಯೇಸುವನ್ನು ಕಂಡ ನಾನು ಕೇಳಿದೆ:
`ನೀನು ಹೇಗೆ ಜನರನ್ನು ಪಾಪಗಳಿಂದ ವಿಮೋಚಿಸುತ್ತೀಯಾ?'
ಆಗ ಯೇಸು ಪ್ರಶ್ನಿಸಿದ: `ಬೈಬಲ್‌ನ ಆದಿ ಕಾಂಡವನ್ನು ಓದಿದ್ದೀಯಾ?' ನಾನು ಹೌದೆಂದು ಗೋಣಾಡಿಸಿದೆ. ಸಂಭಾಷಣೆ ಮುಂದುವರಿಯಿತು.
ಯೇಸು: ಅದರಲ್ಲಿ ಹೇಳಲಾದ ಮೂರು ಆದಿಗಳು ಗೊತ್ತೇ? Read more »
- 3 comments
- 3012 reads
Recent comments
37 weeks 2 days ago
38 weeks 2 days ago
44 weeks 20 hours ago
44 weeks 2 days ago
48 weeks 6 days ago
49 weeks 1 day ago
49 weeks 4 days ago
50 weeks 4 days ago
1 year 1 week ago
1 year 1 week ago