`ಜಾತ್ಯತೀತತೆಯ ರಕ್ಷಣೆ’ ಮತ್ತು `ಸ್ವ ಪಕ್ಷ ರಕ್ಷಣೆ’ಗಳೆರಡರ ಹೊಣೆಯನ್ನೂ ಹೊತ್ತ ಕುಟುಂಬವೊಂದಿದ್ದರೆ ಅದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರದ್ದು. ಈ `ರಕ್ಷಣೆ’ಗಳ ಕಾರಣಕ್ಕಾಗಿ ಅದು ಕೆಲವು ತೀರ್ಮಾನಗಳನ್ನು ಕೈಗೊಳ್ಳುತ್ತದೆ. ಇವು ಕೌಟುಂಬಿಕ ತೀರ್ಮಾನವಾಗಿದ್ದರೂ ಅದನ್ನು ಜೆಡಿಎಸ್ ಎಂಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಕೈಗೊಂಡಂತೆ ಇರುತ್ತವೆ. ಇಲ್ಲವೇ ಪಕ್ಷ ಸಂಘಟನೆಯಲ್ಲಿ/ಸರಕಾರದಲ್ಲಿ ಇರುವ ಅವರ ಮಕ್ಕಳು ಕೈಗೊಂಡಂತೆ ಕಾಣಿಸುತ್ತವೆ. ತೀರಾ ಮುಖ್ಯವಾದ ವಿಚಾರವಾಗಿದ್ದರೆ ದೇವೇಗೌಡರು ಮತ್ತು ಕುಟುಂಬದ ಸದಸ್ಯರ ಮಾರ್ಗದರ್ಶನದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಕೈಗೊಂಡಂತೆ ಇರುತ್ತದೆ.