ಭಾರತ ಮತ್ತು ಅಮೆರಿಕದ ನಡುವಣ ಅಣು ಒಪ್ಪಂದ ದೇಶದ ವಿದ್ಯು್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಬಿಡುತ್ತದೆ. ಇದು ದೇಶಕ್ಕೆ ಒಳ್ಳೆಯದೆಂದು ಕಾಂಗ್ರೆ್ ಹೇಳುತ್ತಿದೆ. ಈ `ಒಳಿತಿನ’ ನಂಬಿಕೆಯನ್ನಿಟ್ಟುಕೊಂಡು ಅದು ಸಂಸತ್ತಿನಲ್ಲಿ ವಿಶ್ವಾಸ ಮತ ಕೋರುತ್ತಿದೆ. ಭಾರತ ಮತ್ತು ಅಮೆರಿಕದ ನಡುವಣ ನಾಗರಿಕ ಅಣು ಒಪ್ಪಂದವನ್ನು ವಿರೋಧಿಸುತ್ತಿರುವ ಬಿಜೆಪಿ ಮತ್ತು ಎಡ ಪಕ್ಷಗಳೆರಡೂ ಅಣು ವಿದ್ಯುತ್ ನ ಒಳಿತನ್ನು ಅಲ್ಲಗಳೆಯುತ್ತಿಲ್ಲ. ಬಿಜೆಪಿಯಂತೂ ಅಮೆರಿಕದ ಜತೆಗೆ ಭಾರತ ವ್ಯೂಹಾತ್ಮಕ ಸಂಬಂಧವನ್ನು ಇಟ್ಟುಕೊಳ್ಳಬೇಕೆಂದೂ ವಾದಿಸುತ್ತಿದೆ. ಆದರೆ ಈ ಎರಡೂ ಪಕ್ಷಗಳು ಅಣು ಒಪ್ಪಂದವನ್ನು ವಿರೋಧಿಸುತ್ತಿವೆ. ಅವುಗಳು ನೀಡುವ ಕಾರಣ ಈ ಒಪ್ಪಂದ ಭಾರತದ ಸಾರ್ವಭೌಮತೆಯನ್ನು ಕಿತ್ತುಕೊಳ್ಳುವಂತಿದೆ. ಮಾತ್ರವ ಭಾರತವನ್ನು ಅಮೆರಿಕದ ಕಿರಿಯ ಪಾಲುದಾರನಾಗಿಸುವಂಥ ಒಪ್ಪಂದವಿದು.
ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಎಲ್ ಕೆ ಆಡ್ವಾಣಿಯವರಂತೂ ಅಣು ಒಪ್ಪಂದದ ಸುತ್ತ ಇರುವ ನಿಗೂಢತೆಯ ಬಗ್ಗೆ ಮಾತನಾಡಿದರು. ಒಪ್ಪಂದದ ಕರಡು, ಐಎಇಎ ಜತೆಗಿನ ಒಪ್ಪಂದ ಕರಡುಗಳನ್ನು ರಹಸ್ಯವಾಗಿಟ್ಟಿರುವುದನ್ನು ಪ್ರಶ್ನಿಸಿದರು. ಎಡ ಪಕ್ಷಗಳಂತೂ ಒಪ್ಪಂದದ ರಹಸ್ಯಾತ್ಮಕತೆಯ ಬಗ್ಗೆ ಆರಂಭದಿಂದಲೂ ಪ್ರಶ್ನೆಗಳನ್ನು ಎತ್ತುತ್ತಲೇ ಇವೆ. ಇದೇನು ಯುಪಿಎ ಸರಕಾರ ವಿಶೇಷವಾಗಿ ರೂಢಿಸಿಕೊಂಡ ರಹಸ್ಯಾತ್ಮಕತೆಯಲ್ಲ. ಅಣುಶಕ್ತಿಗೆ ಸಂಬಂಧಿಸಿದ ಎಲ್ಲವೂ ಭಾರತದಲ್ಲಿ ರಹಸ್ಯವೇ. ಇದಕ್ಕೆ ಅಗತ್ಯವಿರುವ ಕಾನೂನುಗಳನ್ನೂ ನಮ್ಮ ಸಂಸದರೇ ರೂಪಿಸಿ ಜಾರಿಗೆ ತಂದಿದ್ದಾರೆ.
ಈಗ ಅಣು ಒಪ್ಪಂದವನ್ನು ವಿರೋಧಿಸುತ್ತಿರುವ ಎಡ ಮತ್ತು ಬಲ ಪಕ್ಷಗಳಿಗೆ ಒಪ್ಪಂದದ ಕರಡುಗಳನ್ನು `ಕ್ಲಾಸಿಫೈಡ್’ ಎಂದು ಕರೆಯುತ್ತಿರುವುದು ಮಾತ್ರ ಒಂದು ಸಮಸ್ಯೆಯಂತೆ ತೋರುತ್ತಿದೆಯೇ ಹೊರತು ಅಣುಶಕ್ತಿಗೆ ಸಂಬಂಧಿಸಿದ ಖರ್ಚು ವೆಚ್ಚಗಳ ಬಗ್ಗೆ, ಅಣುಶಕ್ತಿ ರಿಯಾಕ್ಟರುಗಳ ಕಾರ್ಯನಿರ್ವಹಣೆಯ ಬಗ್ಗೆ, ವಿಕಿರಣ ಸೋರಿಕೆಗಳ ಬಗ್ಗೆ ಇಲ್ಲಿಯ ತನಕವೂ ಸಂಸತ್ತಿನಲ್ಲಿ ಚರ್ಚೆ ನಡೆದಿಲ್ಲ. ಮಾಧ್ಯಮಗಳು ಈ ವಿಷಯವನ್ನು ಕೆದಕಿದಾಗಲೆಲ್ಲಾ ಅಧಿಕೃತ ರಹಸ್ಯ ಕಾಯ್ದೆಯ ಬೆಂಬಲ ಪಡೆದು ಎಲ್ಲವನ್ನೂ ಮುಚ್ಚಿಡಲಾಗುತ್ತದೆ. ಅಣು ಒಪ್ಪಂದದ ಕುರಿತ ಬಿಸಿಯೇರಿದ ಚರ್ಚೆಗಳಲ್ಲಿ ಈ ವಿಷಯವನ್ನು ಯಾರೂ ಪ್ರಸ್ತಾಪಿಸಲಿಲ್ಲ. ಅಣು ವಿದ್ಯುದ್ ಸ್ಥಾವರಗಳ ಈ ರಹಸ್ಯ ಕಾರ್ಯಾಚರಣೆಯ ಕುರಿತು ಪ್ರಶ್ನಿಸದೇ ಕೇವಲ ಒಪ್ಪಂದದ ಕರಡಿನ ರಹಸ್ಯಾತ್ಮಕತೆಯ ಬಗ್ಗೆ ಮಾತ್ರ ಪ್ರಶ್ನಿಸುತ್ತಿರುವ ಈ ರಾಜಕೀಯ ಪಕ್ಷಗಳು ಅಣು ಒಪ್ಪಂದವನ್ನು ಮಾಡಿಕೊಳ್ಳಲು ಹೊರಟಿರುವ ರಾಜಕೀಯ ಪಕ್ಷಗಳಿಗಿಂತ ಹೇಗೆ ಭಿನ್ನ.
***
ಅಣುಶಕ್ತಿಯ ಸುತ್ತ ಇರುವ ಚರ್ಚೆಗಳಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೊಂದು ವಿಶಿಷ್ಟ ಸ್ಥಾನವಿದೆ. ಅಣು ವಿದ್ಯುತ್ ಸ್ಥಾವರಗಳ ಅಪಾಯದ ಕುರಿತು ಮೊದಲು ಧ್ವನಿಯೆತ್ತಿದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅಣು ವಿದ್ಯುತ್ ಬಳಕೆಯ ವಿರುದ್ಧ ಭಾರತದಲ್ಲಿ ಮೊದಲ ಆಂದೋಲನ ಗುಜರಾತ್ ನಲ್ಲಿ ನಡೆದರೆ ಎರಡನೆಯದ್ದು ಕರ್ನಾಟಕದಲ್ಲಿ ನಡೆಯಿತು. ಈ ಆಂದೋಲನದ ನೇತೃತ್ವವನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ವಹಿಸಿದ್ದರು. ಇವರಿಗೆ ಜೊತೆಯಾಗಿ ಪರಿಸರವಾದಿ ಕುಸುಮಾ ಸೊರಬ ಸೇರಿದಂತೆ ಕನ್ನಡ ನಾಡಿನ ಅನೇಕ ಗಣ್ಯರಿದ್ದರು. ಉತ್ತರ ಕನ್ನಡದ ಕೈಗಾದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಅಣುವಿದ್ಯುತ್ ಸ್ಥಾವರವನ್ನು ಇಡೀ ಕರ್ನಾಟಕದ ಸಂವೇದನಾಶೀಲರೆಲ್ಲಾ ವಿರೋಧಿಸಿದ್ದರು. ಕಾರಂತರಂತೂ ಈ ವಿರೋಧವನ್ನು ದಾಖಲಿಸಲು ಕೆನರಾ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದ್ದರು.
ಈ ಎಲ್ಲಾ ವಿರೋಧದ ಮಧ್ಯೆಯೂ ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಯಿತು. ಈ ತನಕ ಈ ಯೋಜನೆಗೆ ಅಣುಶಕ್ತಿ ಇಲಾಖೆ 2200 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. 1994ರಲ್ಲಿ ಕೈಗಾ ಅಣುಸ್ಥಾವರ ಘಟಕ-1ರ ಗುಮ್ಮಟ ಕುಸಿಯಿತು. ಅರ್ಧಶತಮಾನದ ಅವಧಿಯ ಅಣು ವಿದ್ಯು್ನ ಇತಿಹಾಸದಲ್ಲಿ ಪ್ರಪಂಚದ ಯಾವ ಭಾಗದಲ್ಲೂ ಸಂಭವಿಸದೇ ಇದ್ದ ಅಪಘಾತವಿದು. ವಿದ್ಯು್ ಸ್ಥಾವರ ಚಾಲನೆಯಲ್ಲಿದ್ದಾಗ ಗುಮ್ಮಟದ 130 ಟನ್ ಗಳಷ್ಟು ಭಾರತದ ಕಾಂಕ್ರೀಟ್ ಕುಸಿದಿದ್ದರೆ ಬಹುದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಈ ಅಪಘಾತದ ಪರಿಣಾಮವಾಗಿ ಹೊರಸೂಸಬಹುದಾಗಿದ್ದ ವಿಕಿರಣಗಳು ಒಂದು ಅಣುಬಾಂ್ ಮಾಡಬಹುದಾಗಿದ್ದ ಅನಾಹುಗಳೆಲ್ಲವನ್ನೂ ಮಾಡುತ್ತಿದ್ದವು.
ಅದೃಷ್ಟವಶಾತ್ ಗುಮ್ಮಟ ಕುಸಿದದ್ದು ಕಾಮಗಾರಿಯ ಹಂತದಲ್ಲಿ. ಪರಿಣಾಮವಾಗಿ ವಿಕಿರಣ ಸೋರಿಕೆಯಂಥ ಅನಾಹುತ ಸಂಭವಿಸಲಿಲ್ಲ. ಈ ಕುಸಿತದ ಬಗ್ಗೆ ಎರಡು ತನಿಖೆಗಳು ನಡೆದವು. ಒಂದನ್ನು ಅಣುವಿದ್ಯುತ್ ನಿಯಂತ್ರಣ ಮಂಡಳಿ ನಡೆಸಿತು. ಮತ್ತೊಂದನ್ನು ಅಣು ವಿದ್ಯುತ್ ನಿಗಮ ನಡೆಸಿತು. ಅಣು ವಿದ್ಯುತ್ ನಿಯಂತ್ರಣ ಮಂಡಳಿ ನಡೆಸಿದ ತನಿಖೆಯಲ್ಲಿ ಸ್ವತಂತ್ರ ತಜ್ಞರೂ ಇದ್ದರು. ಈ ಎರಡು ಸಮಿತಿಗಳು ತಮ್ಮ ತನಿಖೆಯನ್ನು ಮುಗಿಸಿ ವರದಿಗಳನ್ನು ನೀಡಿವೆಯಾದರೂ ಈ ತನಕವೂ ತನಿಖೆ ಕಂಡುಕೊಂಡದ್ದೇನು ಎಂಬುದು ಬಹಿರಂಗಗೊಂಡಿಲ್ಲ. ತನಿಖೆಯ ವಿವರಗಳನ್ನೇಕೆ ಬಹಿರಂಗ ಪಡಿಸಲಾಗಿಲ್ಲ ಎಂಬ ಪ್ರಶ್ನೆಯನ್ನು ಯಾವ ರಾಜಕೀಯ ಪಕ್ಷವೂ ಕೇಳಿಲ್ಲ.
ಸಾರ್ವಜನಿಕರ ಹಣವನ್ನು ಬಳಸಿ ನಡೆಸಲಾದ ಕಳಪೆ ಕಾಮಗಾರಿಯೊಂದನ್ನು `ರಾಷ್ಟ್ರೀಯ ಭದ್ರತೆ’ಯ ನೆಪ ಒಡ್ಡಿ ಮುಚ್ಚಿಡುವಂಥ ಘಟನೆ ಪ್ರಪಂಚದ ಯಾವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ನಡೆಯಲು ಸಾಧ್ಯವಿಲ್ಲವೇನೋ.
***
ಅಣುಶಕ್ತಿಯನ್ನು ವಿರೋಧಿಸುವ ಭಾರತದ ಮೊದಲ ಆಂದೋಲನ ನಡೆದದ್ದು ಗುಜರಾ್ನಲ್ಲಿ. ಗುಜರಾತ್ ನ ಕಕ್ರಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಅಣುಶಕ್ತಿ ಸ್ಥಾವರದ ವಿರುದ್ಧ ಮೊದಲ ಪ್ರತಿಭಟನಾ ಪ್ರದರ್ಶನ ನಡೆದದ್ದು 1985ರ ಮೇ 1ರಂದು. ಆಶ್ರಮವೊಂದರೊಳಗೆ ನಡೆದ ಈ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದವರನ್ನೆಲ್ಲಾ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಬಂಧಿಸಲಾಯಿತು. ಅದೇ ವರ್ಷ ಹಿರೋಷಿಮಾ ದಿನ (ಆಗಸ್ಟ್-6) ಮತ್ತೊಂದು ಪ್ರತಿಭಟನಾ ಪ್ರದರ್ಶನ ಸೂರ್ನಲ್ಲಿ ನಡೆಯಿತು. ಅಲ್ಲಿ ಪ್ರತಿಭಟನೆಗೆ ರಾಜ್ಯಮಟ್ಟದ ವೇದಿಕೆಯೊಂದು ರೂಪುಗೊಂಡಿತು. ಇಡೀ ಒಂದು ವರ್ಷ ಕಾಲ ಸಂಪೂರ್ಣ ಕ್ರಾಂತಿ ವಿದ್ಯಾಲಯ (ಐಟಿಆರ್) ಹಲವಾರು ಯುವಕರಿಗೆ ತರಬೇತಿ ನೀಡಿ ಅಣುಶಕ್ತಿಯ ವಿರುದ್ಧ ಜನಜಾಗೃತಿ ಮೂಡಿಸಿತು.
ಈ ಯುವಕರು 292 ಹಳ್ಳಿಗಳಿಗೆ ೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. 1986ರ ಹಿರೋಷಿಮಾ ದಿನದಂದು ಒಂದು ಬೃಹತ್ ರ್ಯಾಲಿಯನ್ನು ನಡೆಸಲೂ ತೀರ್ಮಾನಿಸಲಾಗಿತ್ತು. ಆದರೆ ಗುಜರಾತ್ ಸರಕಾರ ಇದನ್ನು ನಡೆಯದಂತೆ ತಡೆಯಲು ತೀರ್ಮಾನಿಸಿತ್ತು. ರ್ಯಾಲಿಗೆ ಒಂದು ದಿನ ಮೊದಲು ನಿಷೇಧಾಜ್ಞೆಯನ್ನು ಹೇರಲಾಯಿತು. ಈ ಕುರಿತಂತೆ ರ್ಯಾಲಿಯ ಸಂಘಟಕರು ಪೊಲೀಸರನ್ನು ಸಂಪರ್ಕಿಸಿದರೆ `ನೀವು ಖಾಸಗಿ ಸ್ಥಳದಲ್ಲಿ ರ್ಯಾಲಿ ನಡೆಸುತ್ತಿರುವುದರಿಂದ ನಮ್ಮ ಆಕ್ಷೇಪವಿಲ್ಲ’ ಎಂದರು. ನಿಷೇಧಾಜ್ಞೆ ಇರುವಾಗ ನಾಲ್ಕಕ್ಕಿಂತ ಹೆಚ್ಚು ಜನರು ಒಟ್ಟಾಗಿ ಸಂಚರಿಸುವುದು ಅಪರಾಧ. ಪರಿಣಾಮವಾಗಿ ಜನರು ಒಬ್ಬೊಬ್ಬರಾಗಿಯೇ ಬಂದು ರ್ಯಾಲಿಯ ಸ್ಥಳ ಸೇರಿದರು. ಇದ್ದಕ್ಕಿದ್ದಂತೇ ಬಂದ ಪೊಲೀ್ ಪಡೆ ರ್ಯಾಲಿಗಾಗಿ ಸೇರಿದ್ದವರನ್ನೆಲ್ಲಾ ಥಳಿಸತೊಡಗಿತು. ಮಹಿಳೆಯರು ಮಕ್ಕಳೆನ್ನದೆ ಎಲ್ಲರ ಮೇಲೂ ಪೊಲೀಸರ ಗೂಂಡಾಗಿರಿ ನಡೆಯಿತು. ಜನರೂ ಇದೇ ಬಗೆಯಲ್ಲಿ ಪ್ರತಿಕ್ರಿಯಿಸಿದರು. ಕಲ್ಲು ತೂರಾಟ ನಡೆದು ಇಬ್ಬರು ಅಶ್ವಾರೋಹಿ ಪೊಲೀಸರಿಬ್ಬರು ಕೆಳಗುರುಳಿ ಗಾಯಗೊಂಡರು.
ಕೊನೆಗೆ ಪೊಲೀಸರು ಜನರನ್ನು ಚದುರಿಸಿ ಎಂದು ರ್ಯಾಲಿಯ ಸಂಘಟಕರನ್ನೇ ಕೇಳಿಕೊಂಡರು. ಸಂಘಟಕರು ಇದಕ್ಕೆ ಒಪ್ಪಿದರಾದರೂ ಹಿರೋಷಿಮಾದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮತ್ತು ಕಕ್ರಾಪುರ ಸ್ಥಾವರವನ್ನು ವಿರೋಧಿಸುವ ನಿರ್ಣಯವನ್ನು ಅಂಗೀಕರಿಸದೆ ಇಲ್ಲಿಂದ ಕದಲುವುದಿಲ್ಲ ಎಂದರು. ಪೊಲೀಸರ ದೌರ್ಜನ್ಯ ಮರುದಿನವೂ ಮುಂದುವರಿಯಿತು. ಹಳ್ಳಿ ಹಳ್ಳಿಗಳಿಗೆ ನುಗ್ಗಿ ಸ್ಥಾವರವನ್ನು ವಿರೋಧಿಸುವವರನ್ನು ಹುಡುಕಿ ಥಳಿಸಿದರು. ಒಂದೆಡೆ ಕಾರಣವಿಲ್ಲದೆ ಗುಂಡು ಹಾರಿಸಿ ಒಬ್ಬ ಬಾಲಕನನ್ನು ಕೊಂದರು.
***
ಅಣುಶಕ್ತಿಯನ್ನು ವಿರೋಧಿಸುವ ಎಲ್ಲಾ ಆಂದೋಲನಗಳ ಗತಿಯೂ ಇದಕ್ಕಿಂತ ಭಿನ್ನವಾದುದೇನೂ ಅಲ್ಲ. ಜಾದುಗುಡದಲ್ಲಿ ನಡೆಯುತ್ತಿರುವ ಯುರೇನಿಯಂ ಗಣಿಗಾರಿಕೆಯ ವಿರುದ್ಧ ಬಹಳ ವರ್ಷಗಳಿಂದ ನಡೆಯುತ್ತಿರುವ ಆಂದೋಲನದ ಬಗ್ಗೆ ಮಾಧ್ಯಮಗಳೂ ವರದಿ ಮಾಡುವುದಿಲ್ಲ. ಪೋಖ್ರಾ್ನ ಸುತ್ತಮುತ್ತಲಿನ ಜನರ ಆರೋಗ್ಯದ ಬಗ್ಗೆ ಅಧ್ಯಯನಗಳೇ ನಡೆಯುವುದಿಲ್ಲ. ಅಷ್ಟೇಕೆ ತಾರಾಪುರ ಅಣುಸ್ಥಾವರದಲ್ಲಿ ಉಂಟಾದ ವಿಕಿರಣ ಸೋರಿಕೆಯ ಬಗ್ಗೆ ತನಿಖೆ ನಡೆಸಲು ಒಂದು ಸ್ವತಂತ್ರ ತನಿಖಾ ಆಯೋಗವನ್ನು ನೇಮಿಸಲು ಸರಕಾರ ಮುಂದಾಗುವುದಿಲ್ಲ. ಈ ಎಲ್ಲಾ ನಿಗೂಢ ಕ್ರಮಗಳು ಯಾವ ರಾಜಕೀಯ ಪಕ್ಷವನ್ನೂ ಕಾಡುವುದಿಲ್ಲ.
ಅಂದರೆ ಯಾವ ರಾಜಕೀಯ ಪಕ್ಷಕ್ಕೂ ಜನರ ಸಮಸ್ಯೆ ಮುಖ್ಯವಾಗುವುದಿಲ್ಲ. ಎಡಪಕ್ಷಗಳಿಗೆ ಸಿದ್ಧಾಂತ ಮುಖ್ಯವಾಗುವುದು ಭಾರತ ಅಮೆರಿಕದ ಜತೆಗೆ ಒಂದು ಒಪ್ಪಂದ ಮಾಡಿಕೊಂಡರೆ ಮಾತ್ರ. ಭಾರತದ ಜನರ ಜೀವಕ್ಕೆ ಅಪಾಯ ಬಂದಾಗ ಸಿದ್ಧಾಂತ ಪುಸ್ತಕದಲ್ಲಿಯೇ ಇರುತ್ತದೆ. ಬಿಜೆಪಿಗೆ ಅಣುಶಕ್ತಿಯೆಂದರೆ ಅದು ಬಾಂಬ್ ನ ರೂಪದಲ್ಲಷ್ಟೇ ಕಾಣಿಸುತ್ತದೆ. ಉಳಿದವರ ಬಗ್ಗೆ ಹೇಳುವುದಕ್ಕೇನೂ ಉಳಿದಿಲ್ಲ. ಒಂದು ಮಂತ್ರಿ ಸ್ಥಾನಕ್ಕೆ, ಕೆಲವು ಕೋಟಿ ರೂಪಾಯಿಗಳಿಗೆ ಏನನ್ನೂ ಮಾರಿಕೊಳ್ಳಲು ಮಾರುವುದನ್ನು ಬೆಂಬಲಿಸಲು ಸಿದ್ಧರಿದ್ದಾರೆ. ಎಂದಿನಂತೆ ಈ ಒಪ್ಪಂದದಲ್ಲೂ ನಿವ್ವಳ ನಷ್ಟ ಶ್ರೀಸಾಮಾನ್ಯನಿಗೆ.