ವಷ್ಟು ದೊಡ್ಡ ಸಮಸ್ಯೆಗಳಲ್ಲ. ಬದಲಾವಣೆಯೊಂದರ ಭಾಗ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ನೋಟು ಮತ್ತು ನಾಣ್ಯದ ರೂಪದಲ್ಲಿ ಹಣವಿದ್ದಾಗ ಅದರ ನಿರ್ವಹಣೆಗೊಂದು ವಿಕೇಂದ್ರೀಕೃತ ಸ್ವರೂಪವಿರುತ್ತದೆ. ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹತೆಯ ಕುರಿತ ಸಂಶಯ ಬಂದಾಕ್ಷಣ ಗ್ರಾಹಕರು ಏಕಾಏಕಿ ತಮ್ಮ ಹಣವನ್ನು ಹಿಂತೆಗೆಯುತ್ತಾರೆ. ರನ್ ಆನ್ ಬ್ಯಾಂಕ್ ಎಂದು ಕರೆಯುವ ಈ ಪ್ರಕ್ರಿಯೆ ಬ್ಯಾಂಕುಗಳ ಉತ್ತರದಾಯಿತ್ವವನ್ನು ಖಾತರಿ ಪಡಿಸುತ್ತವೆ. ಒಂದು ವೇಳೆ ನಗದನ್ನು ಬಳಸುವುದಕ್ಕೆ ಮಿತಿಯೊಂದನ್ನು ಹೇರಿದರೆ ಈ ಸಾಧ್ಯತೆಯೇ ಇಲ್ಲವಾಗುತ್ತದೆ. ಅಷ್ಟೇ ಅಲ್ಲ ಬ್ಯಾಂಕುಗಳು ತಮ್ಮ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಜೂಜಿನಂಥ ವ್ಯವಹಾರಗಳಿಗೆ ಇಳಿದುಬಿಡುತ್ತವೆ. ಅಮೆರಿಕದ ಗೃಹಸಾಲದ ಸಮಸ್ಯೆ ಸೃಷ್ಟಿಯಾದದ್ದೇ ಹೀಗೆ.