ಕನ್ನಡವೇ ಸತ್ಯ

ಯಾಕೋ ಗೊತ್ತಿಲ್ಲ. ರಾಜ್ ಕುಮಾರ್ ಅಂದರೆ ನನಗಿಷ್ಟ. ಪತ್ರಕರ್ತನಾಗಿ ಎರಡು ಬಾರಿ ನೇರವಾಗಿ ಭೇಟಿಯಾಗಿದ್ದೆ ಅಂದರೆ ನೇರವಾಗಿ ನಾನವರನ್ನು ನೋಡಿದ್ದೆ. ಹಿರಿಯರೆಲ್ಲಾ ಪ್ರಶ್ನೆ ಕೇಳುತ್ತಿದ್ದಾಗ ಸುಮ್ಮನೆ ಕುಳಿತಿದ್ದು ಪತ್ರಿಕಾಗೋಷ್ಠಿ ಮುಗಿದಾಗ ಹತ್ತಿರ ಹೋಗಿ ಪರಿಚಯಿಸಿಕೊಂಡಿದ್ದೆ. ಅವರೂ ‘ಓಹೋ. ನಿಮ್ಮೂರು?’ ಎಂಬ ಲೋಕಾಭಿರಾಮದ ಪ್ರಶ್ನೆ ಕೇಳಿದ್ದರು. ನಾನದಕ್ಕೆ ಹಾಸನ ಎಂದು ಉತ್ತರಿಸಿದರೆ ಹಾಸನದಲ್ಲೆಲ್ಲಿ? ಎಂದು ಮರು ಪ್ರಶ್ನೆಗಳನ್ನು ಎಸೆಯುತ್ತಾ ನನ್ನ ಹಳ್ಳಿ ಯಾವುದೆಂದು ತಿಳಿದುಕೊಂಡೇ ಬೀಳ್ಕೊಟ್ಟಿದ್ದರು.

ಹೀಗೇ ಯೂ ಟ್ಯೂಬ್ ನಲ್ಲಿ ಮತ್ತೇನೋ ಹುಡುಕುತ್ತಿದ್ದಾಗ ಈ ವಿಡಿಯೋ ಕಾಣಿಸಿತು. ನೀವೂ ನೋಡಿ.