ನಾರಾಯಣಗುರುಗಳ ‘ಆತ್ಮೋಪದೇಶ ಶತಕಂ’ ಎಂಬ ಕಾವ್ಯಾತ್ಮಕ ತಾತ್ವಿಕ ಕೃತಿಯ ವ್ಯಾಖ್ಯಾನದ ಮುನ್ನುಡಿಯಲ್ಲಿ ಗುರು ನಿತ್ಯಚೈತನ್ಯ ಯತಿ (1924-1999) ದಾಖಲಿಸಿರುವ ಘಟನೆಯಿದು.
Author: Ismail
ನನ್ನ ಬದುಕಿನ ಗುರುವಾದ ನಾರಾಯಣ ಗುರು
ಗಾನಗಂಧರ್ವನೆಂಬ ಬಿರುದಿನ ಮೂಲಕವೇ ಪ್ರಸಿದ್ಧರಾಗಿರುವ ಕೆ.ಜೆ. ಯೇಸುದಾಸ್ ತಮ್ಮ ಸಿನಿಮಾ ಸಂಗೀತ ಪಯಣವನ್ನು ಆರಂಭಿಸಿದ್ದು ಈ ಕೆಳಗಿನ ಹಾಡಿನ ಮೂಲಕ. ಜಾತಿ ಭೇದಂ ಮತದ್ವೇಷಂ ಏದುಮಿಲ್ಲಾದೆ ಸರ್ವರುಂ ಸೋದರತ್ವೇನ ವಾಳುನ್ನ ಮಾತೃಕಾ ಸ್ಥಾಪನಮಾಣಿದ್ “ಜಾತಿ ಭೇದ, ಮತ ದ್ವೇಷಗಳಿಲ್ಲದೆ ಸರ್ವರೂ ಸೋದರರಂತೆ ಬಾಳುವ ಮಾದರಿ ಸಂಸ್ಥೆಯಿದು” ಎಂದು ಈ ಸಾಲುಗಳನ್ನು ಅನುವಾದಿಸಬಹುದು. ಸುಮಾರು ಹತ್ತು ವರ್ಷಗಳ ಹಿಂದೆ ಗುರು ಸಮಾಧಿ ದಿನದಂದು ಅವರು ಆಡಿದ ಮಾತುಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನವೊಂದು ಇಲ್ಲಿದೆ. ಮೂಲ ಪಠ್ಯ ‘ತಮಸೋಮಾ ಡಾಟ್…
ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
ವಷ್ಟು ದೊಡ್ಡ ಸಮಸ್ಯೆಗಳಲ್ಲ. ಬದಲಾವಣೆಯೊಂದರ ಭಾಗ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ನೋಟು ಮತ್ತು ನಾಣ್ಯದ ರೂಪದಲ್ಲಿ ಹಣವಿದ್ದಾಗ ಅದರ ನಿರ್ವಹಣೆಗೊಂದು ವಿಕೇಂದ್ರೀಕೃತ ಸ್ವರೂಪವಿರುತ್ತದೆ. ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹತೆಯ ಕುರಿತ ಸಂಶಯ ಬಂದಾಕ್ಷಣ ಗ್ರಾಹಕರು ಏಕಾಏಕಿ ತಮ್ಮ ಹಣವನ್ನು ಹಿಂತೆಗೆಯುತ್ತಾರೆ. ರನ್ ಆನ್ ಬ್ಯಾಂಕ್ ಎಂದು ಕರೆಯುವ ಈ ಪ್ರಕ್ರಿಯೆ ಬ್ಯಾಂಕುಗಳ ಉತ್ತರದಾಯಿತ್ವವನ್ನು ಖಾತರಿ ಪಡಿಸುತ್ತವೆ. ಒಂದು ವೇಳೆ ನಗದನ್ನು ಬಳಸುವುದಕ್ಕೆ ಮಿತಿಯೊಂದನ್ನು ಹೇರಿದರೆ ಈ ಸಾಧ್ಯತೆಯೇ ಇಲ್ಲವಾಗುತ್ತದೆ. ಅಷ್ಟೇ ಅಲ್ಲ ಬ್ಯಾಂಕುಗಳು ತಮ್ಮ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಜೂಜಿನಂಥ ವ್ಯವಹಾರಗಳಿಗೆ ಇಳಿದುಬಿಡುತ್ತವೆ. ಅಮೆರಿಕದ ಗೃಹಸಾಲದ ಸಮಸ್ಯೆ ಸೃಷ್ಟಿಯಾದದ್ದೇ ಹೀಗೆ.
ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
ಇನ್ನೊಂದು ದಿನ ಕಳೆದರೆ ನೋಟು ರದ್ದತಿಗೆ ಒಂದು ತಿಂಗಳು ತುಂಬುತ್ತದೆ. ನವೆಂಬರ್ 8ರ ರಾತ್ರಿ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡಿ 500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದು ಪಡಿಸಿದ ಘೋಷಣೆ ಮಾಡುವಾಗ ಇದು ಕಪ್ಪು ಹಣದ ನಿಯಂತ್ರಣಕ್ಕೆ ಅಗತ್ಯ ಎಂದಿದ್ದರು. ಅವರ ಮಾತುಗಳಲ್ಲಿ ಭಯೋತ್ಪಾದಕರಿಗೆ ದೊರೆಯುತ್ತಿರುವ ಸಂಪನ್ಮೂಲವನ್ನು ಕಡಿತಗೊಳಿಸುವುದು, ಖೋಟಾ ನೋಟುಗಳ ನಿಯಂತ್ರಣ ಇತ್ಯಾದಿಗಳೆಲ್ಲವೂ ಇದ್ದವು. ಈಗ ವಾದ ಸರಣಿ ಬದಲಾಗಿದೆ. ಪ್ರಧಾನಿ ಮಂತ್ರಿಯಾದಿಯಾಗಿ ನೋಟು ರದ್ಧತಿಯ ನಿರ್ಧಾರವನ್ನು ಸಮರ್ಥಿಸುವವರೆಲ್ಲರೂ ಭಾರತವನ್ನು ‘ನಗದು ರಹಿತ’…
ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
‘ಡಿಜಿಟಲ್ ಡಿವೈಡ್’ ಅಥವಾ ವಿದ್ಯುನ್ಮಾನ ಕಂದಕ ಎಂಬ ಪದಪುಂಜ ಬಳಕೆಯಾಗುತ್ತಿದ್ದುದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬೌದ್ಧಿಕ ಚರ್ಚೆಗಳಲ್ಲಿ ಮಾತ್ರ. ಆಗೀಗ ನೀತಿ ನಿರೂಪಕರ ಬಾಯಲ್ಲಿ ಈ ಪದ ಕೇಳಿಬರುತ್ತಿತ್ತಾದರೂ ಮುಖ್ಯವಾಹಿನಿಯ ಚರ್ಚಾ ವಿಷಯವಾಗಿರಲಿಲ್ಲ. ಆದರೆ ಕಳೆದ ಹದಿಮೂರು ದಿನಗಳಲ್ಲಿ ಇದು ನಾವಿರುವ ಕೋಣೆಯೊಳಕ್ಕೇ ಬಂದು ಆನೆಯಂತೆ ನಿಂತು ಬಿಟ್ಟಿದೆ. ‘ಡಿಜಿಟಲ್ ಡಿವೈಡ್’ ನಿಜಕ್ಕೂ ಎಷ್ಟು ದೊಡ್ಡ ಸಂಗತಿ ಎಂಬುದನ್ನು ಅರ್ಥ ಮಾಡಿಸಿದ್ದು ನೋಟು ರದ್ದತಿಯ ನಿರ್ಧಾರ. ನವೆಂಬರ್ ಎಂಟರ ರಾತ್ರಿಯೂ ಇದನ್ನು ಬುದ್ಧಿಜೀವಿಗಳ ಬತ್ತಳಿಕೆಯಲ್ಲಿರುವ ಪಾರಿಭಾಷಿಕಗಳಲ್ಲಿ ಒಂದು…
ಮಾಧ್ಯಮ ನಿಯಂತ್ರಣದ ‘ಭದ್ರತಾ’ ತಂತ್ರಗಳು
ಎನ್‌ಡಿಟಿವಿ ಇಂಡಿಯಾ ವಾಹಿನಿ ‘ರಾಷ್ಟ್ರೀಯ ಭದ್ರತೆ’ಯನ್ನು ಅಪಾಯಕ್ಕೆ ಒಡ್ಡುವ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಒಂದು ದಿನ ಪ್ರಸಾರ ಸ್ಥಗಿತಗೊಳಿಸಬೇಕಾದ ಶಿಕ್ಷೆಗೆ ಗುರಿಯಾಗಿದೆ. ಅಂತರ ಸಚಿವಾಲಯ ಸಮಿತಿಯ ಈ ಆದೇಶ ಹೊರ ಬೀಳುವುದಕ್ಕೆ ಕೆಲವು ದಿನಗಳ ಹಿಂದಷ್ಟೇ ಅಮೆರಿಕದ ಬ್ರೂಕಿಂಗ್ ಇನ್ಸ್‌ಟಿಟ್ಯೂಟ್ ಒಂದು ವರದಿಯನ್ನು ಪ್ರಕಟಿಸಿತ್ತು. ‘ಎನ್‌ಡಿಟಿವಿ’ ಪ್ರಸಾರ ಸ್ಥಗಿತದಷ್ಟು ಸುದ್ದಿಯಾಗದ ಮತ್ತೊಂದು ವಿಚಾರವನ್ನು ಈ ವರದಿ ಬಯಲಿಗೆ ತಂದಿತ್ತು. ಅದರ ಪ್ರಕಾರ ‘ಕಾನೂನು–ಸುವ್ಯವಸ್ಥೆ’ಯ ಕಾರಣವನ್ನು ಮುಂದೊಡ್ಡಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ದೇಶಗಳಲ್ಲಿ ಭಾರತಕ್ಕೆ ಅಗ್ರಸ್ಥಾನ. ಈ ವರದಿಯ…
ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ
ಮಾಹಿತಿ ತಂತ್ರಜ್ಞಾನವನ್ನು ಆಡಳಿತಕ್ಕೆ ಬಳಸಿಕೊಳ್ಳುವ ಪರಿಕಲ್ಪನೆ ಹುಟ್ಟಿದಂದಿನಿಂದ ಇಂದಿನ ತನಕವೂ ಎಲ್ಲಾ ಸರ್ಕಾರಗಳ ಘೋಷಣೆಯೂ ಒಂದೇ– ‘ತಂತ್ರಜ್ಞಾನಾಧಾರಿತ ಪಾರದರ್ಶಕ ಆಡಳಿತ’. ಈ ಘೋಷಣೆಯೇನೋ ಕೇಳಲು ಹಿತವಾಗಿದೆ. ಈ ಹಿತಾನುಭವವನ್ನು ಬಳಸಿಕೊಂಡು ನಗದು ರಹಿತ ಆರ್ಥಿಕತೆ, ಪೌರರು ಪಡೆಯುವ ಎಲ್ಲಾ ಸೇವೆಗಳಿಗೂ ಅವರ ‘ಆಧಾರ್’ ಸಂಖ್ಯೆ ಜೋಡಿಸುವ ತಂತ್ರವನ್ನು ಸರ್ಕಾರಗಳು ಸದ್ದಿಲ್ಲದೆ ಜಾರಿಗೊಳಿಸುತ್ತಿವೆ. ಎಷ್ಟರ ಮಟ್ಟಿಗೆಂದರೆ ಇತ್ತೀಚೆಗೆ ಇದನ್ನು ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟವನ್ನು ಪಡೆಯುವುದಕ್ಕೂ ‘ಆಧಾರ್’ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಯಿತು. ದೊಡ್ಡದಾಗಿ ಗದ್ದಲವೆದ್ದ ಮೇಲೆ ‘ಆಧಾರ್’ ಇಲ್ಲದವರಿಗೂ…
ಓಲಾ – ಉಬರ್‌ಗಳೆಂಬ ಬಿಸಿಲುಗುದುರೆಯನೇರಿ…
‘ಎಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳು ಉಬರ್ ಅಥವಾ ಓಲಾ ಟ್ಯಾಕ್ಸಿ ಓಡಿಸಿದರೆ ಸಾಫ್ಟ್‌ವೇರ್ ಎಂಜಿನಿಯರುಗಳಿಗಿಂತ ಹೆಚ್ಚು ಸಂಪಾದಿಸಬಹುದು’ ಇದು ಕಳೆದ ವರ್ಷದ ಆಗಸ್ಟ್‌ನಲ್ಲಿ ಐಟಿ ಉದ್ಯಮದ ಒಳಸುಳಿಗಳನ್ನೆಲ್ಲಾ ಬಲ್ಲವರೊಬ್ಬರು ಆಡಿದ ಮಾತು. ಅವರ ಮಾತುಗಳು ಐಟಿ ಉದ್ಯಮದ ಬಿಕ್ಕಟ್ಟನ್ನು ಧ್ವನಿಸುವುದರ ಜೊತೆಗೆ ಉಬರ್ ಮತ್ತು ಓಲಾಗಳು ಸೃಷ್ಟಿಸುತ್ತಿರುವ ‘ಚಾಲಕ ಉದ್ಯಮಿ’ಗಳ ಕುರಿತ ಶ್ಲಾಘನೆಯನ್ನೂ ಒಳಗೊಂಡಿತ್ತು. ಆ್ಯಪ್ ಎಂಬ ಮಂತ್ರದಂಡ ತಿಂಗಳಿಗೆ ಹೆಚ್ಚೆಂದರೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ದುಡಿಯುತ್ತಿದ್ದ ಚಾಲಕರಿಗೆ ಒಂದು ಲಕ್ಷ ರೂಪಾಯಿ ದುಡಿಯುವ ಅವಕಾಶ ಕಲ್ಪಿಸಿದ…
ಕುತಂತ್ರಾಂಶಗಳ ಯುಗದಲ್ಲಿ ಇ–ಆಡಳಿತ
ಆಲ್ಪ್‌ಸ್ ಪರ್ವತ ಶ್ರೇಣಿ ಯೂರೋಪಿನ ಹಲವು ದೇಶಗಳನ್ನು ವ್ಯಾಪಿಸಿಕೊಂಡಿದೆ. ಆಸ್ಟ್ರಿಯಾಕ್ಕಂತೂ ಇದು ಪ್ರವಾಸಿ ಆಕರ್ಷಣೆಯೂ ಹೌದು. ಈ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ನೂರು ವರ್ಷಕ್ಕೂ ಮಿಗಿಲಾದ ಇತಿಹಾಸವುಳ್ಳ ಹೊಟೇಲ್ ರೊಮ್ಯಾಂಟಿಕ್ ಸೀಹೊಟೆಲ್ ಜಾಗೆರ್ವಿಟ್‌ನಲ್ಲಿ ಕಳೆದ ತಿಂಗಳ ಕೊನೆಯ ವಾರದಲ್ಲಿ ವಿಚಿತ್ರ ಘಟನೆ ನಡೆಯಿತು. ಕೋಣೆಯೊಳಗಿದ್ದ ಯಾವ ಅತಿಥಿಗೂ ಬಾಗಿಲು ತೆರೆದು ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಸಹಜವಾಗಿಯೇ ಬಾಗಿಲು ತೆರೆಯಲಾಗುತ್ತಿಲ್ಲ ಎಂದು ಸ್ವಾಗತಕಾರರಿಗೆ ಫೋನಾಯಿಸಿದರೆ ಅವರಿಗೂ ಇದೇನಾಗುತ್ತಿದೆ ಎಂದು ತಿಳಿಯದ ಸ್ಥಿತಿ ಇತ್ತು. ಎಲೆಕ್ಟ್ರಾನಿಕ್ ಲಾಕಿಂಗ್ ವ್ಯವಸ್ಥೆಯಲ್ಲಿ ಏನಾದರೂ…
ಗ್ಲೋಬಲ್ ವಿಲೇಜ್‌ನ ವಿಲಕ್ಷಣ ಗಮಾರತನ
‘ಗ್ಲೋಬಲ್ ವಿಲೇಜ್’ ಅಥವಾ ಜಾಗತಿಕ ಹಳ್ಳಿ ಎಂಬ ಪಾರಿಭಾಷಿಕವನ್ನು ಚಲಾವಣೆಗೆ ತಂದದ್ದು ಕೆನಡಾದ ಮಾಧ್ಯಮ ತಜ್ಞ ಮಾರ್ಷಲ್ ಮ್ಯಾಕ್ಲುಹಾನ್. ಕ್ಷಣಾರ್ಧದಲ್ಲಿ ಜಗತ್ತಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಮಾಹಿತಿ ಹರಿದಾಡುವ ‘ಎಲೆಕ್ಟ್ರಿಕ್ ಟೆಕ್ನಾಲಜಿ’ಯೊಂದು ಜಗತ್ತನ್ನು ಹಳ್ಳಿಯಾಗಿಸಿಬಿಡುತ್ತದೆ ಎಂದು ಆತ ಹೇಳಿದಾಗ ಅದನ್ನು ಅಚ್ಚರಿಯಿಂದ ಕೇಳಿಸಿಕೊಂಡವರು, ಅದರ ಕುರಿತು ಮುಂದಿನ ಎಂಟು ದಶಕಗಳ ಕಾಲ ಚರ್ಚಿಸುತ್ತಾ ಬಂದವರಾರೂ ಜಗತ್ತು ನಿಜಕ್ಕೂ ಹಳ್ಳಿಯೊಂದರಂತೆ ಆಲೋಚಿಸುತ್ತದೆ ಎಂದು ಭಾವಿಸಿರಲಿಲ್ಲ. ಈ ಹೊತ್ತಿಗಾಗಲೇ ಕಾರ್ಲ್ ಮಾರ್ಕ್ಸ್‌ನಿಂದ ತೊಡಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ…