ಇಂಗ್ಲಿಷ್‌ನಲ್ಲಿ ‘ಟ್ರಾಲ್’ (Troll) ಎನ್ನುವ ಪದವೊಂದಿದೆ. ಈ ಪದದ ಮೂಲ ಉತ್ತರ ಯೂರೋಪಿನ ಜಾನಪದದಲ್ಲಿದೆಯಂತೆ. ಟ್ರಾಲ್ ಎಂದರೆ ‘ಗವಿಯಲ್ಲಿ ವಾಸಿಸುವ ರಕ್ಕಸ’ ಎಂಬ ಅರ್ಥದಲ್ಲಿ ಅಲ್ಲಿ ಬಳಕೆಯಾಗಿದೆ. ಇದು ಇಂಗ್ಲಿಷ್‌ನಲ್ಲಿ ಬಳಕೆಯಾಗುತ್ತಿದ್ದದ್ದು ಹೇಳಿದ್ದನ್ನೇ ಹೇಳುವ ಪ್ರವೃತ್ತಿ ಎಂಬುದನ್ನು ವಿವರಿಸುವುದಕ್ಕೆ. ಇಂಟರ್ನೆಟ್ ಬಂದ ಮೇಲೆ ಇದಕ್ಕೆ ಹಳೆಯ ಅರ್ಥದ ಜೊತೆಗೆ ಹೊಸ ಅರ್ಥವೂ ಸೇರಿಕೊಂಡ ಬೇರೆಯೇ ಆದ ಅರ್ಥವೊಂದು ಪ್ರಾಪ್ತವಾಯಿತು. ಸಾಮಾಜಿಕ ಜಾಲತಾಣಗಳು ಮತ್ತು ಚರ್ಚಾ ವೇದಿಕೆಗಳಲ್ಲಿ ಸುಖಾ ಸುಮ್ಮನೆ ಕೆಣಕುವ, ಜಗಳ ತೆಗೆಯುವ, ಅತಾರ್ಕಿಕ ವಾದಗಳನ್ನು ಮಂಡಿಸುವ…