ಇನ್ನೊಂದು ದಿನ ಕಳೆದರೆ ನೋಟು ರದ್ದತಿಗೆ ಒಂದು ತಿಂಗಳು ತುಂಬುತ್ತದೆ. ನವೆಂಬರ್ 8ರ ರಾತ್ರಿ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡಿ 500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದು ಪಡಿಸಿದ ಘೋಷಣೆ ಮಾಡುವಾಗ ಇದು ಕಪ್ಪು ಹಣದ ನಿಯಂತ್ರಣಕ್ಕೆ ಅಗತ್ಯ ಎಂದಿದ್ದರು. ಅವರ ಮಾತುಗಳಲ್ಲಿ ಭಯೋತ್ಪಾದಕರಿಗೆ ದೊರೆಯುತ್ತಿರುವ ಸಂಪನ್ಮೂಲವನ್ನು ಕಡಿತಗೊಳಿಸುವುದು, ಖೋಟಾ ನೋಟುಗಳ ನಿಯಂತ್ರಣ ಇತ್ಯಾದಿಗಳೆಲ್ಲವೂ ಇದ್ದವು. ಈಗ ವಾದ ಸರಣಿ ಬದಲಾಗಿದೆ. ಪ್ರಧಾನಿ ಮಂತ್ರಿಯಾದಿಯಾಗಿ ನೋಟು ರದ್ಧತಿಯ ನಿರ್ಧಾರವನ್ನು ಸಮರ್ಥಿಸುವವರೆಲ್ಲರೂ ಭಾರತವನ್ನು ‘ನಗದು ರಹಿತ’…