ಹಾರುವವುಗಳಲ್ಲಿ ವಿಮಾನವನ್ನೂ, ಎರಡು ಕಾಲಿನವುಗಳಲ್ಲಿ ಮನುಷ್ಯರನ್ನೂ, ನಾಲ್ಕು ಕಾಲಿನವುಗಳಲ್ಲಿ ಕುರ್ಚಿ, ಮೇಜುಗಳನ್ನು ಮಾತ್ರ ತಿನ್ನದೇ ಬಿಟ್ಟಿರುವ ನನ್ನಂಥ ಕನ್ನಡಿಗರಿಗೆ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ.
About
ಬಾಂಡ್ ಸ್ಟೈಲ್ ನಲ್ಲಿ ನನ್ನ ಹೆಸರು ಹೇಳಲು ಇಷ್ಟ. ಇದನ್ನು ಕೇಳಿ ನೀವು ಗಾಬರಿಯಾಗದಿದ್ದರೆ ಸರಿ. ನಾನು ಇಸ್ಮಾಯಿಲ್, ಮಹಮ್ಮದ್ ಇಸ್ಮಾಯಿಲ್, ಅಬ್ಬು ಮಹಮ್ಮದ್ ಇಸ್ಮಾಯಿಲ್, ನಲ್ಲೂರು ಅಬ್ಬು ಮಹಮ್ಮದ್ ಇಸ್ಮಾಯಿಲ್. ಹೆಸರು ಇಷ್ಟೆಲ್ಲಾ ಉದ್ದವಿದ್ದರೆ ಹೇಳುವುದು ಕಷ್ಟ ಎಂದು ಅದನ್ನು ಎನ್ ಎ ಎಂ ಇಸ್ಮಾಯಿಲ್ ಮಾಡಿಕೊಂಡಿದ್ದೇನೆ.
ವೃತ್ತಿ ಪತ್ರಕರ್ತನದ್ದು. ಸದ್ಯ ಪ್ರಜಾವಾಣಿಯಲ್ಲಿ ಮುಖ್ಯ ಉಪಸಂಪಾದಕನಾಗಿದ್ದೇನೆ. ಬರೆಯುವುದೇ ಕೆಲಸವಾದ್ದರಿಂದ ಬ್ಲಾಗ್ ಗಾಗಿ ಪ್ರತ್ಯೇಕ ಬರೆಯಬೇಕೆಂಬ ಆಸೆಯಿದ್ದರೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ಕೆಲಸ ಮಾಡುವ ಪತ್ರಿಕೆಗಳಿಗೆ ಬರೆದ ಬರೆಹಗಳೇ ಇಲ್ಲಿ ಹೆಚ್ಚು.
ಯೇಸುಕ್ರಿಸ್ತ
ನಾರಾಯಣ ಗುರುಗಳ ಪರಂಪರೆಯ ಗುರು ನಿತ್ಯಚೈತನ್ಯ ಯತಿಗಳು ಎಲ್ಲ ಧರ್ಮಗಳ ಬಗ್ಗೆಯೂ ಆಳವಾದ ಅರಿವಿದ್ದವರು. ದೇಹಕ್ಕೆ ಬಾಧಿಸುವ ರೋಗಗಳಿಗಿಂತಲೂ ಹೆಚ್ಚಾಗಿ ಮನುಷ್ಯನನ್ನು ಕಾಡುವುದು ಮನಸ್ಸಿಗೆ ಬಾಧಿಸುವ ಆಧ್ಯಾತ್ಮಿಕ ರೋಗಗಳು. ಈ ರೋಗಗಳನ್ನು ಪರಿಹರಿಸಿದ ಮಹಾವೈದ್ಯರಲ್ಲಿ ಯೇಸು ಕ್ರಿಸ್ತರೂ ಇದ್ದಾರೆಂಬುದು ಯತಿಗಳ ಅನಿಸಿಕೆ. ಅವರು ಈ ಬಗೆಯ ಅಪೂರ್ವ ವೈದ್ಯರ ಕುರಿತು ರಚಿಸಿರುವ ಗ್ರಂಥದಲ್ಲಿರುವ ಯೇಸುವಿನ ಕುರಿತ ಬರೆಹದ ಭಾವಾನುವಾದ ಇಲ್ಲಿದೆ.
ಗುರುಕುಲದಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಹೆಸರು ಜೋಸೆಫ್. ಆತ ಮಾಡುವ ಕೆಲಸ; ಕಳೆದ ಎರಡು ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿರುವ ಬಡಗಿಯ ಕೆಲಸ. ನಾವಿಬ್ಬರು ಒಟ್ಟಿಗೆ ಕುಳಿತು ಮಾತನಾಡುವಾಗಲೆಲ್ಲಾ ನನ್ನನ್ನು ಬಹಳವಾಗಿ ಆಕರ್ಷಿಸುವುದು ಈ ಜೋಸೆಫ್‌ನ ಮಗ. ಅಪ್ಪನಿಂದ ಬರುವುದನ್ನೆಲ್ಲಾ ಈ ಮಗ ಪಡೆದುಕೊಂಡಿದ್ದ. ನಾನವನನ್ನು ಯೇಸು ಎಂದೇ ಕರೆಯುತ್ತಿದ್ದೆ. ಯೇಸು ಎಂಬ ಪದದ ಅರ್ಥ ಮತ್ತಾಯನು ಬರೆದ ಸುವಾರ್ತೆಯಲ್ಲಿ ಹೇಳಿರುವಂತೆ `ಜನಗಳನ್ನು ಪಾಪಗಳಿಂದ ಕಾಪಾಡುವವನು' ಎಂದಾಗಿದೆ. ಇಂದು ಮುಂಜಾನೆ ಗೆಳೆಯ ಜೋಸೆಫ್ ಜತೆ ಮಾತನಾಡಲು ತೊಡಗಿದಾಗ ವಾಗ್‌ರೂಪಿಯಾದ ಯೇಸುವನ್ನು ಕಂಡ ನಾನು ಕೇಳಿದೆ:
`ನೀನು ಹೇಗೆ ಜನರನ್ನು ಪಾಪಗಳಿಂದ ವಿಮೋಚಿಸುತ್ತೀಯಾ?'
ಆಗ ಯೇಸು ಪ್ರಶ್ನಿಸಿದ: `ಬೈಬಲ್‌ನ ಆದಿ ಕಾಂಡವನ್ನು ಓದಿದ್ದೀಯಾ?' ನಾನು ಹೌದೆಂದು ಗೋಣಾಡಿಸಿದೆ. ಸಂಭಾಷಣೆ ಮುಂದುವರಿಯಿತು.
ಯೇಸು: ಅದರಲ್ಲಿ ಹೇಳಲಾದ ಮೂರು ಆದಿಗಳು ಗೊತ್ತೇ?
ಚಾರ್ಲ್ಸ್ ಮಿನೆಜೆಸ್ ಎಂಬ ಜೋಸೆಫ್ ಕೆ.
ಕಳೆದ ವರ್ಷ ಅಂದರೆ 2005ರ ಜುಲೈ ತಿಂಗಳಲ್ಲಿ ಲಂಡನ್ ಸ್ಫೋಟ ಸಂಭವಿಸಿತು. ಈ ಘಟನೆಯ ನಂತರ ಬ್ರೆಜಿಲ್ ನ ಯುವಕನೊಬ್ಬನನ್ನು ಲಂಡನ್ ಪೊಲೀಸರು 'ತಪ್ಪಾಗಿ' ಕೊಂದು ಬಿಟ್ಟರು. ಇದೇ ಹೊತ್ತಿಗೆ ಕಾಶ್ಮೀರದಲ್ಲೂ ಸೇನಾ ಪಡೆಗಳು ಮಕ್ಕಳನ್ನು ಉಗ್ರಗಾಮಿಗಳೆಂದು ಭಾವಿಸಿ ಕೊಂದ ಘಟನೆಯೂ ನಡೆದಿತ್ತು. ಆಗ ಬರೆದ ಲೇಖನ ಇದು.
ನಾದಯೋಗಿಯ ಮೇಲೊಂದು ಪ್ರಯೋಗ
ಗುರು ನಿತ್ಯಚೈತನ್ಯ ಯತಿ 1924ರಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಮುರಿಞಕಲ್ಲ್ ಎಂಬಲ್ಲಿ ಹುಟ್ಟಿದರು. 1952ರಲ್ಲಿ ಶ್ರೀ ನಾರಾಯಣಗುರುಗಳ ಉತ್ತರಾಧಿಕಾರಿಯಾಗಿದ್ದ ಶ್ರೀ ನಟರಾಜಗುರುಗಳ ಶಿಷ್ಯತ್ವ ಸ್ವೀಕರಿಸಿದರು. ತತ್ವಶಾಸ್ತ್ರ ಮತ್ತು ಮನೋವಿಜ್ಞಾನದ ವಿದ್ವಾಂಸರಾಗಿದ್ದ ಶ್ರೀ ನಿತ್ಯಚೈತನ್ಯ ಯತಿ ಇಂಗ್ಲಿಷ್ ಹಾಗೂ ಮಲೆಯಾಳಂನಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. 1999ರಲ್ಲಿ ಸಮಾಧಿಸ್ಥರಾಗುವವರೆಗೂ ಫರ್ನ್ ಹಿಲ್ಸ್‌ನ ನಾರಾಯಣ ಗುರುಕುಲಂ ಮತ್ತು ಈಸ್ಟ್ ವೆಸ್ಟ್ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿದ್ದರು. ಯತಿಗಳ `ಮರಕ್ಕಾನಾವತ್ತವರ್’ ಪುಸ್ತಕದಲ್ಲಿರುವ ಇಬ್ಬರು ಅಸಾಧಾರಣ ಯೋಗಿಗಳ ಕುರಿತ ಲೇಖನದ ಆಯ್ದ ಭಾಗದ ಭಾವಾನುವಾದ ಇಲ್ಲಿದೆ.
1964ರಲ್ಲಿ ಯಾವುದೋ ಕಾರಣಕ್ಕಾಗಿ ಋಷಿಕೇಶಕ್ಕೆ ಹೋಗಿ ಶಿವಾನಂದಾಶ್ರಮದಲ್ಲಿ ಉಳಿದುಕೊಳ್ಳಬೇಕಾಯಿತು. ಅಲ್ಲಿರುವ ಒಂದು ಕಟ್ಟಡದಿಂದ ರಾತ್ರಿ ಹಗಲೆನ್ನದೆ ಹಾಡು ಕೇಳಿಬರುತ್ತಿತ್ತು. ಈ ಹಾಡಿನ ಮಾಧುರ್ಯಕ್ಕೆ ಮಾರುಹೋದ ನಾನು ಆ ಕಟ್ಟಡ ಬಾಗಿಲನ್ನೊಮ್ಮೆ ತಟ್ಟಿ ನೋಡಿದೆ. ಆಗ ಹಾಡು ನಿಂತು ಬಾಗಿಲು ತೆರೆದುಕೊಂಡಿತು.
ಬಾಗಿಲು ತೆರೆದದ್ದು ಸುಮಾರು ಐವತ್ತರ ಆಸುಪಾಸಿನಲ್ಲಿದ್ದ ಒಬ್ಬ ಸನ್ಯಾಸಿ. ಕಾವಿಧಾರಿ. ಮುಂಡನಕ್ಕೆ ಒಳಗಾದ ತಲೆ. ಮುಖದಲ್ಲಿಯೂ ಕೂದಲುಗಳಿಲ್ಲ.
ಸನ್ಯಾಸಿಗಳ ಹೆಸರು ಕೇಳುವ ಅಗತ್ಯವಿಲ್ಲ. ಸುಮ್ಮನೆ ಸ್ವಾಮೀಜಿ ಎಂದು ಕರೆದರೆ ಸಾಕು. `ಸ್ವಲ್ಪ ಹೊತ್ತು ಹಾಡು ಕೇಳಲೇ ಸ್ವಾಮೀಜಿ?’ ಎಂದೆ.