ತೊಳೆದು ಶುಭ್ರವಾಗಿರುವ ಟ್ಯಾಕ್ಸಿಗಳು ಎಂದಿನಂತೆ ಆ ಮುಂಜಾನೆಯೂ ಅಜೀಜ್‌ಗೆ ಉತ್ಸಾಹ ತುಂಬಿದವು.
ಅಂಥದ್ದೊಂದು ಟ್ಯಾಕ್ಸಿಯಲ್ಲಿ ಹತ್ತಿ ಕುಳಿತು ಆಫೀಸಿನತ್ತ ಹೊರಟ ಅವನಿಗೆ ಚುನಾವಣೆಯ ಗಡಿಬಿಡಿಯನ್ನು ಮುಗಿಸಿ ಸುಧಾರಿಸಿಕೊಳ್ಳುತ್ತಿರುವ ಮುಂಬೈ ಕಾಣಿಸುವುದರ ಜತೆಗೆ ಟ್ಯಾಕ್ಸಿಯ ಗಾಜಿಗಂಟಿಸಿದ್ದ ಹುಲಿಯ ತಲೆ ಇರುವ ಸ್ಟಿಕರ್ ಕಾಣಿಸಿತು.ಹಿಂದಿನ ದಿನ ಪ್ರದೀಪ್ ಪಿಳ್ಳೈ ಊಟದ ಹೊತ್ತಿನಲ್ಲಿ `ಸರಕಾರ ಬದಲಾಗಿದೆ’ ಎಂದಿದ್ದ. ಜಯಂತ್ ಕರ್ಮಾರ್ಕರ್ ಮತ್ತೇನೋ ಹೇಳಿದ್ದ ಆದರೆ ಪ್ರದೀಪ್ ಪಿಳ್ಳೆಯ ಮಾತು ಸುಖಾ ಸುಮ್ಮನೆ ನಿಗೂಢವನ್ನು ಧ್ವನಿಸುತ್ತಿದೆ ಎಂದು ಅಜೀಜ್‌ಗೆ ಅನ್ನಿಸಿತ್ತು.

ಟ್ಯಾಕ್ಸಿ ಬಂದು ನರೀಮನ್ ಪಾಯಿಂಟ್‌ನ ಬಹುಮಹಡಿ ಕಟ್ಟಡದ ಎದುರು ನಿಲ್ಲುವ ಹೊತ್ತಿಗೆ ಅಜೀಜ್‌ಗೆ ಮುಂಬೈ ಬದಲಾಗಿಲ್ಲ ಅನ್ನಿಸತೊಡಗಿತ್ತು. ಲೋಕಲ್ ಟ್ರೈನುಗಳು ಮುಂಬೈಯನ್ನು ಸೀಳಿಕೊಂಡು ಓಡುತ್ತಿವೆ. ಚರ್ಚ್ ಗೇಟ್‌ನಲ್ಲಿ ಎಂದಿನಂತೆ ಪ್ರಯಾಣಿಕರ ಗುಂಪು ಇಳಿದು ಆಚೀಚೆ ನೋಡದೆ ಓಡುತ್ತಿದೆ. ಊಟದ ಡಬ್ಬ ಸೈಕಲೇರುತ್ತಿವೆ…