‘ಗ್ಲೋಬಲ್ ವಿಲೇಜ್’ ಅಥವಾ ಜಾಗತಿಕ ಹಳ್ಳಿ ಎಂಬ ಪಾರಿಭಾಷಿಕವನ್ನು ಚಲಾವಣೆಗೆ ತಂದದ್ದು ಕೆನಡಾದ ಮಾಧ್ಯಮ ತಜ್ಞ ಮಾರ್ಷಲ್ ಮ್ಯಾಕ್ಲುಹಾನ್. ಕ್ಷಣಾರ್ಧದಲ್ಲಿ ಜಗತ್ತಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಮಾಹಿತಿ ಹರಿದಾಡುವ ‘ಎಲೆಕ್ಟ್ರಿಕ್ ಟೆಕ್ನಾಲಜಿ’ಯೊಂದು ಜಗತ್ತನ್ನು ಹಳ್ಳಿಯಾಗಿಸಿಬಿಡುತ್ತದೆ ಎಂದು ಆತ ಹೇಳಿದಾಗ ಅದನ್ನು ಅಚ್ಚರಿಯಿಂದ ಕೇಳಿಸಿಕೊಂಡವರು, ಅದರ ಕುರಿತು ಮುಂದಿನ ಎಂಟು ದಶಕಗಳ ಕಾಲ ಚರ್ಚಿಸುತ್ತಾ ಬಂದವರಾರೂ ಜಗತ್ತು ನಿಜಕ್ಕೂ ಹಳ್ಳಿಯೊಂದರಂತೆ ಆಲೋಚಿಸುತ್ತದೆ ಎಂದು ಭಾವಿಸಿರಲಿಲ್ಲ. ಈ ಹೊತ್ತಿಗಾಗಲೇ ಕಾರ್ಲ್ ಮಾರ್ಕ್ಸ್‌ನಿಂದ ತೊಡಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ…