ಆಲ್ಪ್‌ಸ್ ಪರ್ವತ ಶ್ರೇಣಿ ಯೂರೋಪಿನ ಹಲವು ದೇಶಗಳನ್ನು ವ್ಯಾಪಿಸಿಕೊಂಡಿದೆ. ಆಸ್ಟ್ರಿಯಾಕ್ಕಂತೂ ಇದು ಪ್ರವಾಸಿ ಆಕರ್ಷಣೆಯೂ ಹೌದು. ಈ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ನೂರು ವರ್ಷಕ್ಕೂ ಮಿಗಿಲಾದ ಇತಿಹಾಸವುಳ್ಳ ಹೊಟೇಲ್ ರೊಮ್ಯಾಂಟಿಕ್ ಸೀಹೊಟೆಲ್ ಜಾಗೆರ್ವಿಟ್‌ನಲ್ಲಿ ಕಳೆದ ತಿಂಗಳ ಕೊನೆಯ ವಾರದಲ್ಲಿ ವಿಚಿತ್ರ ಘಟನೆ ನಡೆಯಿತು. ಕೋಣೆಯೊಳಗಿದ್ದ ಯಾವ ಅತಿಥಿಗೂ ಬಾಗಿಲು ತೆರೆದು ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಸಹಜವಾಗಿಯೇ ಬಾಗಿಲು ತೆರೆಯಲಾಗುತ್ತಿಲ್ಲ ಎಂದು ಸ್ವಾಗತಕಾರರಿಗೆ ಫೋನಾಯಿಸಿದರೆ ಅವರಿಗೂ ಇದೇನಾಗುತ್ತಿದೆ ಎಂದು ತಿಳಿಯದ ಸ್ಥಿತಿ ಇತ್ತು. ಎಲೆಕ್ಟ್ರಾನಿಕ್ ಲಾಕಿಂಗ್ ವ್ಯವಸ್ಥೆಯಲ್ಲಿ ಏನಾದರೂ…