‘ಎಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳು ಉಬರ್ ಅಥವಾ ಓಲಾ ಟ್ಯಾಕ್ಸಿ ಓಡಿಸಿದರೆ ಸಾಫ್ಟ್‌ವೇರ್ ಎಂಜಿನಿಯರುಗಳಿಗಿಂತ ಹೆಚ್ಚು ಸಂಪಾದಿಸಬಹುದು’ ಇದು ಕಳೆದ ವರ್ಷದ ಆಗಸ್ಟ್‌ನಲ್ಲಿ ಐಟಿ ಉದ್ಯಮದ ಒಳಸುಳಿಗಳನ್ನೆಲ್ಲಾ ಬಲ್ಲವರೊಬ್ಬರು ಆಡಿದ ಮಾತು. ಅವರ ಮಾತುಗಳು ಐಟಿ ಉದ್ಯಮದ ಬಿಕ್ಕಟ್ಟನ್ನು ಧ್ವನಿಸುವುದರ ಜೊತೆಗೆ ಉಬರ್ ಮತ್ತು ಓಲಾಗಳು ಸೃಷ್ಟಿಸುತ್ತಿರುವ ‘ಚಾಲಕ ಉದ್ಯಮಿ’ಗಳ ಕುರಿತ ಶ್ಲಾಘನೆಯನ್ನೂ ಒಳಗೊಂಡಿತ್ತು. ಆ್ಯಪ್ ಎಂಬ ಮಂತ್ರದಂಡ ತಿಂಗಳಿಗೆ ಹೆಚ್ಚೆಂದರೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ದುಡಿಯುತ್ತಿದ್ದ ಚಾಲಕರಿಗೆ ಒಂದು ಲಕ್ಷ ರೂಪಾಯಿ ದುಡಿಯುವ ಅವಕಾಶ ಕಲ್ಪಿಸಿದ…