ಮಾಹಿತಿ ತಂತ್ರಜ್ಞಾನವನ್ನು ಆಡಳಿತಕ್ಕೆ ಬಳಸಿಕೊಳ್ಳುವ ಪರಿಕಲ್ಪನೆ ಹುಟ್ಟಿದಂದಿನಿಂದ ಇಂದಿನ ತನಕವೂ ಎಲ್ಲಾ ಸರ್ಕಾರಗಳ ಘೋಷಣೆಯೂ ಒಂದೇ– ‘ತಂತ್ರಜ್ಞಾನಾಧಾರಿತ ಪಾರದರ್ಶಕ ಆಡಳಿತ’. ಈ ಘೋಷಣೆಯೇನೋ ಕೇಳಲು ಹಿತವಾಗಿದೆ. ಈ ಹಿತಾನುಭವವನ್ನು ಬಳಸಿಕೊಂಡು ನಗದು ರಹಿತ ಆರ್ಥಿಕತೆ, ಪೌರರು ಪಡೆಯುವ ಎಲ್ಲಾ ಸೇವೆಗಳಿಗೂ ಅವರ ‘ಆಧಾರ್’ ಸಂಖ್ಯೆ ಜೋಡಿಸುವ ತಂತ್ರವನ್ನು ಸರ್ಕಾರಗಳು ಸದ್ದಿಲ್ಲದೆ ಜಾರಿಗೊಳಿಸುತ್ತಿವೆ. ಎಷ್ಟರ ಮಟ್ಟಿಗೆಂದರೆ ಇತ್ತೀಚೆಗೆ ಇದನ್ನು ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟವನ್ನು ಪಡೆಯುವುದಕ್ಕೂ ‘ಆಧಾರ್’ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಯಿತು. ದೊಡ್ಡದಾಗಿ ಗದ್ದಲವೆದ್ದ ಮೇಲೆ ‘ಆಧಾರ್’ ಇಲ್ಲದವರಿಗೂ…