ಎನ್‌ಡಿಟಿವಿ ಇಂಡಿಯಾ ವಾಹಿನಿ ‘ರಾಷ್ಟ್ರೀಯ ಭದ್ರತೆ’ಯನ್ನು ಅಪಾಯಕ್ಕೆ ಒಡ್ಡುವ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಒಂದು ದಿನ ಪ್ರಸಾರ ಸ್ಥಗಿತಗೊಳಿಸಬೇಕಾದ ಶಿಕ್ಷೆಗೆ ಗುರಿಯಾಗಿದೆ. ಅಂತರ ಸಚಿವಾಲಯ ಸಮಿತಿಯ ಈ ಆದೇಶ ಹೊರ ಬೀಳುವುದಕ್ಕೆ ಕೆಲವು ದಿನಗಳ ಹಿಂದಷ್ಟೇ ಅಮೆರಿಕದ ಬ್ರೂಕಿಂಗ್ ಇನ್ಸ್‌ಟಿಟ್ಯೂಟ್ ಒಂದು ವರದಿಯನ್ನು ಪ್ರಕಟಿಸಿತ್ತು. ‘ಎನ್‌ಡಿಟಿವಿ’ ಪ್ರಸಾರ ಸ್ಥಗಿತದಷ್ಟು ಸುದ್ದಿಯಾಗದ ಮತ್ತೊಂದು ವಿಚಾರವನ್ನು ಈ ವರದಿ ಬಯಲಿಗೆ ತಂದಿತ್ತು. ಅದರ ಪ್ರಕಾರ ‘ಕಾನೂನು–ಸುವ್ಯವಸ್ಥೆ’ಯ ಕಾರಣವನ್ನು ಮುಂದೊಡ್ಡಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ದೇಶಗಳಲ್ಲಿ ಭಾರತಕ್ಕೆ ಅಗ್ರಸ್ಥಾನ. ಈ ವರದಿಯ…