‘ಡಿಜಿಟಲ್ ಡಿವೈಡ್’ ಅಥವಾ ವಿದ್ಯುನ್ಮಾನ ಕಂದಕ ಎಂಬ ಪದಪುಂಜ ಬಳಕೆಯಾಗುತ್ತಿದ್ದುದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬೌದ್ಧಿಕ ಚರ್ಚೆಗಳಲ್ಲಿ ಮಾತ್ರ. ಆಗೀಗ ನೀತಿ ನಿರೂಪಕರ ಬಾಯಲ್ಲಿ ಈ ಪದ ಕೇಳಿಬರುತ್ತಿತ್ತಾದರೂ ಮುಖ್ಯವಾಹಿನಿಯ ಚರ್ಚಾ ವಿಷಯವಾಗಿರಲಿಲ್ಲ. ಆದರೆ ಕಳೆದ ಹದಿಮೂರು ದಿನಗಳಲ್ಲಿ ಇದು ನಾವಿರುವ ಕೋಣೆಯೊಳಕ್ಕೇ ಬಂದು ಆನೆಯಂತೆ ನಿಂತು ಬಿಟ್ಟಿದೆ. ‘ಡಿಜಿಟಲ್ ಡಿವೈಡ್’ ನಿಜಕ್ಕೂ ಎಷ್ಟು ದೊಡ್ಡ ಸಂಗತಿ ಎಂಬುದನ್ನು ಅರ್ಥ ಮಾಡಿಸಿದ್ದು ನೋಟು ರದ್ದತಿಯ ನಿರ್ಧಾರ. ನವೆಂಬರ್ ಎಂಟರ ರಾತ್ರಿಯೂ ಇದನ್ನು ಬುದ್ಧಿಜೀವಿಗಳ ಬತ್ತಳಿಕೆಯಲ್ಲಿರುವ ಪಾರಿಭಾಷಿಕಗಳಲ್ಲಿ ಒಂದು…